ಇಂಗ್ಲೀಷ್ ಬರಲ್ಲ ಅಂತಾ ಕಾಲೇಜಿನಲ್ಲಿ ರೇಗಿಸಿದ್ರು.. ಛಲ ಬಿಡದೆ ಮೊದಲ ಯತ್ನದಲ್ಲೇ 50ನೇ ರ್ಯಾಂಕ್ ಪಡೆದು IAS ಆದ ಸುರಭಿ. ಯುಪಿಎಸ್ ಸಿ ಪರೀಕ್ಷೆ ಪಾಸ್ ಮಾಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಕಠಿಣ ಪರಿಶ್ರಮ, ಅಪಾರ ಶ್ರದ್ಧೆ ಹಾಗೂ ತಾಳ್ಮೆ ಇರಬೇಕು. ಅದರಲ್ಲೂ ಕನ್ನಡ ಅಥವಾ ಹಿಂದಿ ಮಾಧ್ಯಮದಲ್ಲಿ ಓದಿದ ಗ್ರಾಮೀಣ ಪ್ರತಿಭೆಗಳಿಗೆ ಇಂಗ್ಲೀಷ್ ಭಾಷೆ ಎನ್ನುವುದು ಬಹುದೊಡ್ಡ ಸವಾಲಾಗಿರುತ್ತದೆ. ಆದರೆ, ಈ ಎಲ್ಲ ಅಡೆತಡೆಗಳನ್ನ ಮೆಟ್ಟಿ ನಿಂತು, ಇಂಗ್ಲೀಷ್ ಬರುವುದಿಲ್ಲ ಎಂದು ಹೀಯಾಳಿಸಿದವರ ಮುಂದೆಯೇ ಮೊದಲ.