Video: ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲೇ ಇಂಥಾ ಸ್ಥಿತಿಯೇ? ರೋಗಿಯ ಬೆಡ್ ಮೇಲೆ ಹುಳುಗಳ ಓಡಾಟ! JDS ಗರಂ. ಬೆಂಗಳೂರು: ರಾಜ್ಯ ಸರ್ಕಾರ, ಆರೋಗ್ಯ ಇಲಾಖೆ ಸಚಿವರು ಅದೆಷ್ಟೇ ಎಚ್ಚರಿಕೆ ಕೊಟ್ಟರೂ ಸಹಿತ ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಆಗಾಗ ಚಿಕಿತ್ಸೆ, ನೈರ್ಮಲ್ಯ ವಿಚಾರವಾಗಿ, ವೈದ್ಯರ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ಅಹಿಕತರ ಘಟನೆಗಳು ಸಂಭವಿಸುತ್ತಲೇ ಇವೆ . ಇದೀಗ ರಾಯಚೂರಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಐಸಿಯುನಲ್ಲಿ ಅಪಘಾತಕ್ಕೀಡಾದ ರೋಗಿಗೇ ಸರಿಯಾಗಿ ಚಿಕಿತ್ಸೆ ಕೊಡದೇ ಅವರ ಮೈಮೇಲೆ ಹುಳುಗಳ ಓಡಾಡಿದ ಘಟನೆ.