ಚಾಮರಾಜನಗರದ ಹುರುಳಿನಂಜನಪುರ ಗ್ರಾಮದಲ್ಲಿ ಮಂಗಗಳ ಹಾವಳಿ ವಿಪರೀತವಾಗಿದೆ. ಮಂಗಗಳ ಗುಂಪು ಮನೆ, ಶಾಲೆಗಳಿಗೆ ದಾಳಿ ಮಾಡಿ, ಆಹಾರ ಕದ್ದು, ವಸ್ತುಗಳನ್ನು ಹಾಳು ಮಾಡುತ್ತಿದೆ. ವಿದ್ಯಾರ್ಥಿಗಳು, ಗೃಹಿಣಿಯರು ಭೀತರಾಗಿದ್ದಾರೆ. ಗ್ರಾಮಸ್ಥರು ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಮಂಗಗಳ ಕಾಟಕ್ಕೆ ಮುಕ್ತಿ ನೀಡುವಂತೆ ಜನರು ಒತ್ತಾಯಿಸಿದ್ದಾರೆ. ಚಾಮರಾಜನಗರ, ನ.29: ಆ ಗ್ರಾಮಕ್ಕೆ ಒಂದು ನಟೋರಿಯಸ್ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಈ ಗ್ಯಾಂಗ್ ಹಾಡಹಗಲೇ ನಡೆಸುತ್ತಿರುವ ರಾಬರಿಗೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಮನೆಯಿಂದ ಆಚೆ ಬರಲು ಗೃಹಿಣಿಯರು ಭಯಪಡುತ್ತಿದ್ದರೆ, ವಿದ್ಯಾರ್ಥಿಗಳು ಶಾಲೆಗೆ ಹೋಗಲು ಪರದಾಡುವಂತಾಗಿದೆ.