ವಿಜಯಲಕ್ಷ್ಮಿ ಅವರು ಬಳ್ಳಾರಿಯ ಕನಕ ದುರ್ಗಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದರ್ಶನ್ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸಿ, ದೇವಿಗೆ ಉಡಿ ತುಂಬುವ ಕಾರ್ಯ ಮಾಡಿದ್ದಾರೆ. ದೇವಾಲಯಕ್ಕೆ ಹರಕೆಯೊಂದನ್ನು ವಿಜಯಲಕ್ಷ್ಮಿ ದರ್ಶನ್ ತೀರಿಸಿದ್ದಾರೆ. ವಿಜಯಲಕ್ಷ್ಮಿ ಅವರು ದೇವಾಲಯದ ಪೂಜೆ ಮುಗಿಸಿ, ಬೆಂಗಳೂರಿಗೆ ಮರಳಿದ್ದಾರೆ. ವಿಜಯಲಕ್ಷ್ಮಿ ಅವರು ವಿಶೇಷ ಪೂಜೆ ಮಾಡಿಸುತ್ತಿರುವ ಫೋಟೊಗಳು, ವಿಡಿಯೋಗಳು ಈಗಾಗಲೇ ವೈರಲ್ ಆಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಜಾರಿಯಲ್ಲಿದೆ. ಇದರ ನಡುವೆ ನಟ ದರ್ಶನ್ಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆದುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಜೈಲಿನ ಹೊರಗೆ ಚಿಕಿತ್ಸೆ ಪಡೆದುಕೊಳ್ಳಲು ದರ್ಶನ್ ಇಚ್ಛಿಸಿದ್ದಾರೆ. ಆದರೆ ನ್ಯಾಯಾಲಯವು ದರ್ಶನ್ ಕೋರಿಕೆಯನ್ನು ಪೂರ್ಣವಾಗಿ ಒಪ್ಪಿಲ್ಲ.