ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ದಾರುಣ ಅಪಘಾತ ಸಂಭವಿಸಿದೆ. ಗೃಹಪ್ರವೇಶದ ಆಹ್ವಾನ ಪತ್ರ ನೀಡುತ್ತಿದ್ದ ತಂದೆ-ಮಗಳ ಬೈಕ್ಗೆ ವೇಗದ ಕಾರು ಡಿಕ್ಕಿ ಹೊಡೆದಿದೆ. ಪ್ರಕಾಶ್ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದು, ಪುತ್ರಿ ಶ್ರುತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಕುಟುಂಬದ ಸಂಭ್ರಮವನ್ನು ದುಃಖಕ್ಕೆ ತಿರುಗಿಸಿದೆ. ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಹಾಸನ , ನ.29: ಮನೆಯ ಗೃಹಪ್ರವೇಶದ ಆಹ್ವಾನ ಪತ್ರಿಕೆಯನ್ನು ಸಂಬಂಧಿಕರಿಗೆ ನೀಡಿ ಖುಷಿಯಿಂದ ಮನೆಗೆ ಹಿಂದಿರುಗುತ್ತಿದ್ದ ತಂದೆ ಮತ್ತು ಮಗಳ ಬೈಕ್ಗೆ ಅತಿ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ತಂದೆ ಸ್ಥಳದಲ್ಲೇ ಮೃತಪಟ್ಟು, ಮಗಳು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜೋಗಿಪುರ ಗೇಟ್.