ಈ ವಾರ ಸಿಂಹದ ಗುರು-ಕುಜ, ತುಲಾದ ಶುಕ್ರ ಗ್ರಹಗಳ ಪ್ರಭಾವದಿಂದ ಉತ್ಸಾಹ, ಸೌಹಾರ್ದತೆ ಹೆಚ್ಚಲಿದೆ. ವೃಶ್ಚಿಕದ ರವಿ, ಬುಧ ಸಂಚಾರ, ಮೀನದ ಶನಿಯ ವಕ್ರಗತಿ ಪ್ರತಿ ರಾಶಿಯ ಮೇಲೆ ವಿಭಿನ್ನ ಪರಿಣಾಮ ಬೀರಲಿದೆ. ರಾಹು-ಕೇತು ಪರಿವರ್ತನೆ ಮಹತ್ವದ ಬದಲಾವಣೆಗೆ ನಾಂದಿ. ಪ್ರತಿಯೊಂದು ರಾಶಿಗೂ ವೃತ್ತಿ, ಆರ್ಥಿಕ, ಆರೋಗ್ಯ ಮತ್ತು ಸಂಬಂಧಗಳ ಕುರಿತು ಜ್ಯೋತಿಷ್ಯದ ಒಳನೋಟಗಳನ್ನು ಇಲ್ಲಿ ಪಡೆಯಿರಿ. ಈ ವಾರದಲ್ಲಿ ಸಿಂಹದ ಗುರು, ಕುಜರು ಉತ್ಸಾಹ ತುಂಬಿದರೆ, ತುಲಾದ ಶುಕ್ರ ಸೌಹಾರ್ದದ ತಂಪನ್ನು ಬೀರುವನು. ವೃಶ್ಚಿಕದ ರವಿಯನ್ನು ಡಿಸೆಂಬರ್ ೨ರಂದು ಬುಧನು ಹೋಗಿ ಸೇರುವನು. ಮೀನದ ವಕ್ರ ಶನಿ ತಾಳ್ಮೆಯ ಪಾಠ ಹೇಳಿದರೆ, ವಾರಾಂತ್ಯದ ರಾಹು, ಕೇತು ಪರಿವರ್ತನೆಗೆ ನಾಂದಿಯಾಗಲಿದೆ.