2026ರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಶ್ರೀಲಂಕಾ ಎ ತಂಡ ಪಾಕಿಸ್ತಾನ ಎ ತಂಡವನ್ನು ರೋಚಕ ಫೈನಲ್ನಲ್ಲಿ ಒಂದು ವಿಕೆಟ್ನಿಂದ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ದೋಹಾದಲ್ಲಿ ನಡೆದ ಪಂದ್ಯದಲ್ಲಿ ನಿಶಾನ್ ಮದುಷ್ಕ 87 ರನ್ ಗಳಿಸಿ ಮಿಂಚಿದರು. ಸೋಲಿನ ಅಂಚಿನಲ್ಲಿದ್ದ ಶ್ರೀಲಂಕಾ, ಕೊನೆಯ ವಿಕೆಟ್ನ ನಿರ್ಣಾಯಕ ಜೊತೆಯಾಟದಿಂದ ಪ್ರಶಸ್ತಿ ಗೆದ್ದುಕೊಂಡಿತು. ಇದು ಶ್ರೀಲಂಕಾ ಎ ತಂಡದ ಮೂರನೇ ಪ್ರಶಸ್ತಿಯಾಗಿದೆ. ದೋಹಾದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಎ ತಂಡವನ್ನು ಒಂದು ವಿಕೆಟ್ನಿಂದ ಮಣಿಸಿದ ಶ್ರೀಲಂಕಾ, ಮೂರನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದೆ. ಈ ಮೂಲಕ ಟೂರ್ನಿಯಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿದ್ದ ಪಾಕಿಸ್ತಾನದ ಗೆಲುವಿನ ಓಟಕ್ಕೂ ಬ್ರೇಕ್ ಹಾಕಿದೆ.