Bigg Boss Kannada season 13: ಈ ಬಾರಿ ಈ ಜಿದ್ದು ಗಗನ್ ಮತ್ತು ಗಾನವಿ ನಡುವೆ ಶುರುವಾದಂತಿದೆ. ಭಾನುವಾರದ ಎಪಿಸೋಡಿನಲ್ಲಿ ಸುದೀಪ್ ಎದುರು ಈ ಇಬ್ಬರು ಸ್ಪರ್ಧಿಗಳು ಪರಸ್ಪರರ ಮೇಲೆ ಚಾಲೆಂಜ್ ಮಾಡಿಕೊಂಡಿದ್ದಾರೆ. ಇಬ್ಬರೂ ಸಹ ಇನ್ನೊಬ್ಬರನ್ನು ಮನೆಯಿಂದ ಹೊರಗೆ ಕಳಿಸಿಯೇ ಸಿದ್ಧ ಎಂದು ತೊಡೆತಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪರಸ್ಪರ ಸ್ಪರ್ಧೆ ಇದ್ದೇ ಇರುತ್ತದೆ. ಆದರೆ ಕೆಲವು ಸ್ಪರ್ಧಿಗಳ ನಡುವೆ ಈ ಸ್ಪರ್ಧೆ ಒಂದು ಹೆಜ್ಜೆ ಮುಂದೆ ಹೋಗಿ ಜಿದ್ದಾಗಿ ಪರಿಣಮಿಸುತ್ತದೆ. ನಿಮಗೆ ಹರ್ಟ್ ಮಾಡಿದ ವ್ಯಕ್ತಿಯ ಚಿತ್ರ ಇಟ್ಟು ಕಾರಣ ನೀಡಿ ಚಿತ್ರವನ್ನು ಒಡೆಯಬೇಕು ಎಂದು ಸುದೀಪ್ ಹೇಳಿದ್ದರು.