ನವದೆಹಲಿ: ಡೇವಿಸ್ ಕಪ್ ಭಾರತ ಟೆನಿಸ್ ತಂಡದ ಆಡದ ನಾಯಕನ ಸ್ಥಾನಕ್ಕೆ ಒಲಿಂಪಿಕ್ಸ್ ಪದಕ ವಿಜೇತ ಲಿಯಾಂಡರ್ ಪೇಸ್ ಹಾಗೂ ಕನ್ನಡಿಗ ರೋಹನ್ ಬೋಪಣ್ಣ ರೇಸ್ನಲ್ಲಿದ್ದಾರೆ ಎನ್ನಲಾಗಿದೆ. ಹಾಲಿ ನಾಯಕ ಹಾಗ. ಹಾಲಿ ನಾಯಕ ಹಾಗೂ ಅಖಿಲ ಭಾರತ ಟೆನಿಸ್ ಸಂಸ್ಥೆಯ (ಎಐಟಿಎ) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರೋಹಿತ್ ರಾಜ್ಪಾಲ್ ಅವಧಿ ಡಿಸೆಂಬರ್ 31ಕ್ಕೆ ಪೂರ್ಣಗೊಳ್ಳಲಿದೆ. ಎಐಟಿಎ ಖಜಾಂಚಿಯಾಗಿಯೂ ಸೇವೆ ಸಲ್ಲಿಸಿರುವ ರೋಹಿತ್ ರಾಜ್ಪಾಲ್, ನಾಯಕನ ಹುದ್ದೆ ವಿಸ್ತರಣೆ ಅಥವಾ ಮರು ಆಯ್ಕೆ ಬಯಸಿಲ್ಲ ಎಂದು ಖಾತ್ರಿಪಡಿಸಿದ್ದಾರೆ. 53 ವರ್ಷದ ಲಿಯಾಂಡರ್ ಪೇಸ್, 1996ರ ಅಟ್ಲಾಂಟಾ ಒಲಿಂಪಿಕ್ಸ್ ಸಿಂಗಲ್ಸ್ನಲ್ಲಿ ಕಂಚು ಜಯಿಸಿದ್ದು, ಸತತ ಏಳು ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.