ಕ್ರೈಸ್ಟ್ಚರ್ಚ್: ಕೆಳ ಕ್ರಮಾಂಕದ ಬ್ಯಾಟರ್ಳೊಂದಿಗೆ ಯುವ ಬ್ಯಾಟರ್ ಧ್ರುವ ಜುರೆಲ್ (88 ರನ್, 170 ಎಸೆತ, 14 ಬೌಂಡರಿ) ನಡೆಸಿದ ದಿಟ್ಟ ಹೋರಾಟದಿಂದ ಭಾರತ ತಂಡ ಹಿನ್ನಡೆಯ ಅಂತರ ತಗ್ಗಿಸಿಕೊಂಡರೂ. ಈಗಾಗಲೆ 240 ಪ್ಲಸ್ ರನ್ಗಳ ಮುನ್ನಡೆ ಬಿಟ್ಟುಕೊಟ್ಟಿರುವ ಭಾರತ ತಂಡ, ಕಿವೀಸ್ ನೆಲದಲ್ಲಿ ಸರಣಿಗಳ (ಟಿ20, ಏಕದಿನ, ಟೆಸ್ಟ್) ಕ್ಲೀನ್ಸ್ವೀಪ್ ಸಾಧಿಸುವ ಹಾದಿ ಕಠಿಣಗೊಂಡಿದ್ದು, ಎರಡನೇ ಸರದಿಯಲ್ಲಿ ನ್ಯೂಜಿಲೆಂಡ್ ಬ್ಯಾಟರ್ಗಳನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರಷ್ಟೇ ಗೆಲುವಿನ ಆಸೆ ಜೀವಂತವಿರಲಿದೆ. ಪಂದ್ಯದ ಐದನೇ ದಿನದಾಟಕ್ಕೆ ಮಳೆ ಅಡಚಣೆಯ ಮುನ್ಸೂಚನೆಯೂ ಇದೆ.