ತಿಂಗಳ ವಿದ್ಯುತ್ ಬಿಲ್ ಹೆಚ್ಚಾದಾಗ ಆತಂಕಪಡುವ ಬದಲು, ನಿಮ್ಮ ವಿದ್ಯುತ್ ಮೀಟರ್ ರೀಡಿಂಗ್ ಮತ್ತು ಸೀರಿಯಲ್ ನಂಬರ್ ಅರ್ಥಮಾಡಿಕೊಳ್ಳುವುದು ಒಳ್ಳೆಯದು. ಆ ಮೂಲಕ ಹಣ ಉಳಿತಾಯ ಮಾಡಬಹುದು. ಹಾಗಾದರೆ ವಿದ್ಯುತ್ ಮೀಟರ್ ಲೆಕ್ಕಾಚಾರ, ಎಷ್ಟು ಯೂನಿಟ್ ವಿದ್ಯುತ್ ಬಳಕೆಯಾಗಿದೆ ಎಂದು ಪರಿಶೀಲಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ. ಬೆಂಗಳೂರು, ನವೆಂಬರ್ 29: ತಿಂಗಳ ಕೊನೆಯಲ್ಲಿ ವಿದ್ಯುತ್ ಬಿಲ್ ದಿಢೀರ್ ಹೆಚ್ಚಿಗೆ ಬಂದರೆ ಸಹಜವಾಗಿಯೇ ಆತಂಕ ಉಂಟಾಗುತ್ತದೆ. ಕೆಲವೊಮ್ಮೆ ಮನೆಯಲ್ಲಿ ಹೆಚ್ಚಿನ ವಿದ್ಯುತ್ ಉಪಕರಣಗಳನ್ನು ಬಳಸದೇ ಇದ್ದರೂ ನಿರೀಕ್ಷೆಗಿಂತ ಹೆಚ್ಚು ಬಿಲ್ ಬರುತ್ತದೆ.