ಬದುಕು ಎಲ್ಲರದ್ದೂ ಒಂದೇ ಆಗಿರುವುದಿಲ್ಲ. ಕೆಲವರದ್ದು ತಮ್ಮ ಇಳಿ ವಯಸ್ಸಿನಲ್ಲೂ ದುಡಿದು ತಿನ್ನುವ ಪರಿಸ್ಥಿತಿ. ಈ ಅಜ್ಜಿಯದ್ದು ಇದೇ ರೀತಿಯ ಬದುಕು. ರಸ್ತೆ ಬದಿಯಲ್ಲಿ ನಿಂತು ಕ್ಯಾಂಡಲ್ ಮಾರುತ್ತಿದ್ದ ಅಜ್ಜಿಗೆ ವ್ಯಕ್ತಿಯೊಬ್ಬರು ಸಹಾಯ ಮಾಡಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ. ಇಳಿ ವಯಸ್ಸಿನಲ್ಲಿ ಮೂರು ಹೊತ್ತಿನ ತುತ್ತಿಗಾಗಿ ಕಷ್ಟ ಪಡುವ ಹಿರಿಜೀವಗಳನ್ನು ಕಂಡಾಗ ಕಣ್ಣಂಚಲಿ ನೀರು ಜಿನುಗುತ್ತದೆ. ಬಂದ ಅಲ್ಪ ಸ್ವಲ್ಪ ಹಣದಲ್ಲಿ ಜೀವನ ಸಾಗಿಸುತ್ತಾರೆ. ಆದರೆ ಇಲ್ಲೊಬ್ಬರು ವ್ಯಕ್ತಿ, ವೃದ್ಧೆಯ (old woman) ಸ್ವಂತ ದುಡಿಮೆಗೆ ಸಹಾಯ ಮಾಡಿದ್ದಾರೆ.