ಮಂಡ್ಯದ ಚಂದಗಾಲು ಗ್ರಾಮದಲ್ಲಿ 17 ವರ್ಷದ ಸಿಂಚನಾ ಪಾಗಲ್ ಪ್ರೇಮಿ ಹಾಗೂ ರೌಡಿಶೀಟರ್ ಹೃತಿಕ್ ಗೌಡನ ನಿರಂತರ ಕಿರುಕುಳದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರೀತಿಯ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಬಾಲಕಿ ಮತ್ತು ಪೋಷಕರ ಮೇಲೆ ಹಲ್ಲೆ ನಡೆದಿದೆ. ಕುಟುಂಬಸ್ಥರು ಆರೋಪಿಗಳಿಗೆ ಕಠಿಣ ಶಿಕ್ಷೆಗಾಗಿ ಆಗ್ರಹಿಸಿದ್ದು, ಶಿವಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮಂಡ್ಯ, ನ.29: ಪಾಗಲ್ ಪ್ರೇಮಿಯೊಬ್ಬನ ಹುಚ್ಚಾಟ ಹಾಗೂ ಆತನಿಗೆ ಸಾಥ್ ನೀಡಿದ ರೌಡಿಶೀಟರ್ನ ದೌರ್ಜನ್ಯಕ್ಕೆ 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ಮಂಡ್ಯ ತಾಲೂಕಿನ ಚಂದಗಾಲು ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಸಿಂಚನ (17) ಎಂದು ಗುರುತಿಸಲಾಗಿದೆ.