ಪ್ರತಿಯೊಬ್ಬರೂ ಅಡುಗೆ ಮಾಡುವ ಮುನ್ನ ತರಕಾರಿಗಳನ್ನು ತಮ್ಮದೇ ಆದ ವಿಧಾನದಲ್ಲಿ ಸ್ವಚ್ಛಗೊಳಿಸುತ್ತಾರೆ. ಕೆಲವರು ತರಕಾರಿಗಳನ್ನು ಕಟ್ ಮಾಡಿ ನಂತರ ಅವುಗಳನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಿದರೆ, ಇನ್ನೂ ಕೆಲವರು ತರಕಾರಿಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ನಂತರ ಕತ್ತರಿಸುತ್ತಾರೆ. ಇವೆರಡರಲ್ಲಿ ತರಕಾರಿ ತೊಳೆಯುವಯಾವುದು ಸರಿಯಾದ ವಿಧಾನ ಯಾವುದು, ತರಕಾರಿ ಸ್ವಚ್ಛಗೊಳಿಸುವಾಗ ನೆನಪಿನಲ್ಲಿಡಬೇಕಾದ ವಿಷಯಗಳೇನು ಎಂಬುದನ್ನು ತಿಳಿದುಕೊಳ್ಳಿ. ಹಣ್ಣು, ತರಕಾರಿಗಳನ್ನು (vegetables) ಸೇವನೆ ಮಾಡುವ ಮುನ್ನ ಚೆನ್ನಾಗಿ ತೊಳೆಯುವುದು ತುಂಬಾನೇ ಮುಖ್ಯ. ಇಲ್ಲದಿದ್ದರೆ ಅದರಲ್ಲಿರುವ ಸೂಕ್ಷ್ಮಾಣು ಜೀವಿಗಳು, ರಾಸಾಯನಿಕಗಳು ದೇಹವನ್ನು ಸೇರುವ ಸಾಧ್ಯತೆ ಇರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಅಡುಗೆ ಮಾಡುವ ಮುನ್ನ ತರಕಾರಿಗಳನ್ನು ಶುದ್ಧ ನೀರಿನಿಂದ ತೊಳೆಯುತ್ತಾರೆ.