ಹಳೆಯ ಸಿನಿಮಾಗಳ ಸುವರ್ಣ ನೆನಪುಗಳನ್ನು ಇಂದಿನ ತಲೆಮಾರಿಗೆ ಹೊಸ ರೂಪದಲ್ಲಿ ಪರಿಚಯಿಸುವ ಉದ್ದೇಶದಿಂದ ‘ಜಗ ಮೆಚ್ಚಿದ ಮಗ’ ಸಿನಿಮಾವನ್ನು ಬಣ್ಣದಲ್ಲಿ ರಿಲೀಸ್ ಮಾಡಲಾಗುತ್ತಿದೆ. ಈ ಚಿತ್ರದ ಮರುಸೃಷ್ಟಿ ತಮ್ಮ ಪಾಲಿಗೆ ಕೇವಲ ಒಂದು ಕೆಲಸವಲ್ಲ, ಕನ್ನಡ ಚಿತ್ರರಂಗದ ಅಮೂಲ್ಯ ನೆನಪನ್ನು ಉಳಿಸುವ ಪ್ರಯತ್ನ ಎಂದು ಉದಯಶಂಕರ್ ಹೇಳಿದ್ದಾರೆ. ವರನಟ ಡಾ ರಾಜ್ಕುಮಾರ್ ಅಭಿನಯದ ‘ಜಗ ಮೆಚ್ಚಿದ ಮಗ’ ಸಿನಿಮಾ 1972ರಲ್ಲಿ ಬಿಡುಗಡೆ ಆಗಿತ್ತು. ಆಗ ಕಪ್ಪು-ಬಿಳುಪಿನಲ್ಲಿ ಬಂದಿದ್ದ ಈ ಸಿನಿಮಾವನ್ನು ಈಗ ಬಣ್ಣದಲ್ಲಿ ರಿಲೀಸ್ ಮಾಡಲಾಗುತ್ತಿದೆ. ಹೌದು, 54 ವರ್ಷಗಳ ಹಿಂದಿನ ಈ ಸಿನಿಮಾವನ್ನು ಆಧುನಿಕ ತಂತ್ರಜ್ಞಾನದ ನೆರವಿನಿಂದ ಬಣ್ಣದಲ್ಲಿ ಮರುಸೃಷ್ಟಿಸಿ, 5.