ಚಳಿಗಾಲದಲ್ಲಿ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಸಮಯ ಕಳೆಯಲು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಚಳಿಗಾಲದಲ್ಲಿ ಕೊರೆಯುವ ಚಳಿಯ ನಡುವೆ ಬಿಸಿಲಿನಲ್ಲಿ ಕುಳಿತುಕೊಳ್ಳುವುದರಿಂದ ದೇಹ ಬೆಚ್ಚಗಾಗುವುದು ಮಾತ್ರವಲ್ಲ ಮನಸ್ಸು ಕೂಡ ಉಲ್ಲಾಸಗೊಳ್ಳುತ್ತದೆ. ಅಷ್ಟೇ ಅಲ್ಲದೆ ಬಿಸಿಲಿನಲ್ಲಿ ಕೊಂಚ ಹೊತ್ತು ಸಮಯ ಕಳೆಯುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳು ಕೂಡ ಲಭಿಸುತ್ತದೆ. ಆ ಪ್ರಯೋಜನಗಳು ಯಾವುವು, ಬಿಸಿಲಿನಲ್ಲಿ ಎಷ್ಟು ಹೊತ್ತು ಸಮಯ ಕಳೆಯುವುದು ಸೂಕ್ತ ಎಂಬುದನ್ನು ತಿಳಿದುಕೊಳ್ಳಿ. ಚಳಿಗಾಲದ (winter) ಆಗಮನದೊಂದಿಗೆ ಹೆಚ್ಚಿನವರು ಬಿಸಿಲಿನಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ. ಹೌದು ಕೊರೆಯುವ ಚಳಿಯಿಂದ ದೇಹವನ್ನು ಬೆಚ್ಚಗಾಗಿಡಲು ಬಿಸಿಲಿಗೆ ಮೈಯೊಡ್ಡುತ್ತಾರೆ. ಬಿಸಿಲು ದೇಹವನ್ನು ಬೆಚ್ಚಗಾಗಿಸುವುದಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ.