ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ನಮ್ಮ ಜೀವನಕ್ಕೆ ಬೇಕಾಗಿರುವ ಸಾಕಷ್ಟು ಮಾರ್ಗದರ್ಶನಗಳನ್ನು ನೀಡಿದ್ದಾರೆ. ಅವುಗಳನ್ನು ಪಾಲಿಸುವ ಮೂಲ ನಾವು ಯಶಸ್ವಿ ಜೀವನವನ್ನು ನಡೆಸಬಹುದು. ಅವರು ಮನುಷ್ಯನು ಮಾಡುವಂತಹ ಕೆಲವೊಂದು ತಪ್ಪುಗಳ ಬಗ್ಗೆಯೂ ಒತ್ತಿ ಹೇಳಿದ್ದು, ಈ ತಪ್ಪುಗಳಿಂದ ಸಮಾಜದಲ್ಲಿ ಗೌರವ ಕಡಿಮೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹಾಗಿದ್ರೆ ನಮ್ಮ ಯಾವ ತಪ್ಪುಗಳು ನಮ್ಮ ಗೌರವವನ್ನು ಹಾಳು ಮಾಡುತ್ತದೆ ಎಂಬುದನ್ನು ನೋಡೋಣ ಬನ್ನಿ. ತಪ್ಪು (mistakes) ಮಾಡುವುದು ಮನುಷ್ಯನ ಸಹಜ ಗುಣ. ಪ್ರತಿಯೊಬ್ಬರೂ ಕೂಡ ಒಂದಷ್ಟು ತಪ್ಪುಗಳನ್ನು ಮಾಡೇ ಮಾಡುತ್ತಾರೆ.