ಲೋಕಸಭಾ ಕ್ಷೇತ್ರಗಳ ಮರುವಿಂಡಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವಿನ ಪರ ಇರುವ ಡಿಎಂಕೆ ಪಕ್ಷದ ಮನವೊಲಿಸಲು ಕಾಂಗ್ರೆಸ್ ಮುಖಂಡರು ಕೊನೆಯ ಕ್ಷಣದ ಕಸರತ್ತು ನಡೆಸಿದ್ದಾರೆ. ಅದರ ಪ್ರಯತ್ನದ ಭಾಗವಾಗಿ ಆ ಪಕ್ಷದ ದಿಗ್ಗರು ಚೆನ್ನೈನಲ್ಲಿರುವ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ನಿವಾಸಕ್ಕೆ ಮುಗಿಬಿದ್ದಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮೊದಲಾದವರು ಸ್ಟಾಲಿನ್ ಅವರನ್ನು ಮನವೊಲಿಸಲು ಯತ್ನಿಸಿದ್ದಾರೆ. ಚೆನ್ನೈ, ನವೆಂಬರ್ 29: ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆ ವಿಚಾರ ಜೋರು ಸದ್ದು ಮಾಡುತ್ತಿದೆ. ಏಪ್ರಿಲ್ ತಿಂಗಳಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆ ವಿಫಲಗೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಬಾರಿ ಶತಾಯಗತಾಯ ಮಸೂದೆಗೆ ಬೆಂಬಲ ಗಿಟ್ಟಿಸಲು ಯತ್ನಿಸುತ್ತಿದೆ.