ಬೆಂಗಳೂರು: ಮಹಿಳೆಯರ ಪಿಜಿಗಳಿಗೆ ಅಕ್ರಮವಾಗಿ ನುಗ್ಗುವ ಜತೆಗೆ ಅಲ್ಲಿದ್ದ ಯುವತಿಯರಿಗೆ ಖಾಸಗಿ ಅಂಗಾಂಗ ಪ್ರದರ್ಶಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಕಾಲಿಗೆ ಗುಂಡೇಟು ಹೊಡೆದು ಬಂಧಿಸ. ಈತನು ಶುಕ್ರವಾರದಂದು ಚಿಕ್ಕಜಾಲ ಸಮೀಪದ ಹುಣಸಮಾರನಹಳ್ಳಿ ಹಾಗೂ ಯಲಹಂಕದಲ್ಲಿರುವ 3 ಮಹಿಳಾ ಪಿಜಿಗಳಿಗೆ ನುಗ್ಗಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಸಂಬಂಧ ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಮೊದಲಿಗೆ ಹುಣಸಮಾರನಹಳ್ಳಿಯಲ್ಲಿದ್ದ ಪಿಜಿಗೆ ನುಗ್ಗಿದ್ದ ನರೇಶ್, ಯುವತಿಯೊಬ್ಬಳಿಂದ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸುವ ಜತೆಗೆ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಈ ವೇಳೆ ಆಕೆಯ ಕಿರುಚಾಟ ಕೇಳಿ ಸ್ಥಳಕ್ಕೆ ಅಕ್ಕಪಕ್ಕದವರು ಬಂದಿದ್ದರು. ಆಗ ನರೇಶ್ ಪರಾರಿಯಾಗಿದ್ದ.