ಹುಬ್ಬಳ್ಳಿ: ವೀರಶೈವ-ಲಿಂಗಾಯತ ಮತ್ತು ಒಳಪಂಗಡಗಳದವರು ಒಗ್ಗಟ್ಟಾಗಬೇಕು. ಹಿಂದುಳಿದ ವರ್ಗದ ಪಟ್ಟಿಯಲ್ಲಿ ಸೇರ್ಪಡೆಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ, ಒತ್ತಡ ಹೇರಲಾಗುವುದು. ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಹುಬ್ಬಳ್ಳಿ ತಾಲೂಕು, ಧಾರವಾಡ ಜಿಲ್ಲಾ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ನಗರದ ಅಮರಗೋಳ ಎಪಿಎಂಸಿ ಆವರಣದ ವಸ್ತು ಸಂಗ್ರಹಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಬಣಜಿಗರ ವಧು-ವರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮವರು ಒಗ್ಗಟ್ಟು ಆಗದೇ ಇದ್ದರೆ ರವಿ ಹಂಜ್ ಅಂಥವರು ಸಂಶೋಧನೆ ಹೆಸರಲ್ಲಿ ಸವಾರಿ ಮಾಡುತ್ತಾರೆ. ಜಗತ್ತಿಗೆ ಮೊದಲು ಅನುಭವ ಮಂಟಪ ಅಥವಾ ಪಾರ್ಲಿಮೆಂಟ್ ನೀಡಿದವರು ಬಸವಣ್ಣನವರು. ಇದೇ ದಾರಿಯಲ್ಲಿ ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ಜಾರಿಗೆ ತರುತ್ತಿದೆ ಎಂದರು.