Bride Beats Groom: ಮದುವೆ ಮನೆ ಅಂದ್ರೆ ಸಂಭ್ರಮ, ನಗು, ಖುಷಿ ಇರಬೇಕು. ಆದ್ರೆ ಮಧ್ಯಪ್ರದೇಶದ ಶಾಜಾಪುರದಲ್ಲಿ ಮದುವೆಯ ಸಂಪ್ರದಾಯವೊಂದು ಗಲಾಟೆಗೆ ತಿರುಗಿದ್ದು, ವರನಿಗೆ ವಧು ಚಪ್ಪಲಿಯಿಂದ ಹೊಡೆ. ಚಪ್ಪಲಿ ಕದ್ದಾಟದ ಸಂಪ್ರದಾಯದ ವೇಳೆ ಹಣದ ವಿಚಾರವಾಗಿ ಇಬ್ಬರ ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೊನೆಗೆ ವಧುವಿಲ್ಲದೆ ವರನ ಕಡೆಯವರು ವಾಪಸ್ ಹೋಗಿದ್ದಾರೆ ಎನ್ನಲಾಗಿದೆ.ಶಾಜಾಪುರದ ಅನುರಾಗ್ ಯಾದವ್ (23) ಮತ್ತು ಯೋಗಿತಾ ಖೇರ್ ಅವರ ಮದುವೆ ನವೆಂಬರ್ 20, 2026ರಂದು ನಡೆದಿದೆ. ಸುಮಾರು 7–8 ತಿಂಗಳ ಹಿಂದೆಯೇ ಇವರ ಮದುವೆ ಸಂಬಂಧ ನಿಶ್ಚಯವಾಗಿತ್ತು. ಮದುವೆಯ ಶಾಸ್ತ್ರಗಳು ಯಾವುದೇ ಸಮಸ್ಯೆಯಿಲ್ಲದೆ ಮುಗಿದಿದ್ದವು.25 ಸಾವಿರ ರೂ. ಕೇಳಿದ ವಧುವಿನ ಕಡೆಯವರು?