Car Bonnet Smoke: ಸಾಮಾನ್ಯವಾಗಿ ಕಾರಿನಲ್ಲಿ ಪ್ರಯಾಣಿಸುವಾಗ ಮುಂಭಾಗಕ್ಕೆ ಡಿಕ್ಕಿಯಾದರೆ ಅಥವಾ ಏನಾಗದೆ ಇದ್ದರೂ ಏಕಾಏಕಿ ಬಾನೆಟ್ನಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಳ್ಳುತ್ತದೆ. ಇದನ್ನು ನೋಡಿದಾ. ಇದನ್ನು ನೋಡಿದಾಗ ಯಾವ ಡ್ರೈವರ್ಗಾದರೂ ಒಂದು ನಿಮಿಷ ಗಾಬರಿ ಆಗುವುದಂತು ಸತ್ಯ ಬಿಡಿ. ಇಂತಹ ಸಂದರ್ಭಗಳಲ್ಲಿ ಆತಂಕಕ್ಕೆ ಒಳಗಾಗುವ ಬದಲು ಮೊದಲು ಏನು ಮಾಡಬೇಕು ಎಂಬುದರ ವಿವರ ಹೀಗಿದೆ ನೋಡಿ. ಕಾರಿನಲ್ಲಿ ಹೊಗೆ ಕಾಣಿಸಿಕೊಂಡರೆ ಪ್ರಯಾಣ ಅರ್ಧಕ್ಕೆ ನಿಲ್ಲಿಸೋದಾ ಅಥವಾ ಸ್ವಲ್ಪ ಸಮಯ ಕಾರನ್ನು ನಿಲ್ಲಿಸಿ, ಆ ನಂತರ ಓಡಿಸುವುದು ಸರಿನಾ? ಆದರೆ, ಇಂತಹ ಸಂದರ್ಭದಲ್ಲಿ ಗಾಬರಿಯಿಂದ ತಪ್ಪು ನಿರ್ಧಾರ ತೆಗೆದುಕೊಂಡರೆ ಕಾರಿನ ಇಂಜಿನ್ಗೆ ಮಾತ್ರವಲ್ಲ, ಒಳಗಿರುವ ಅಮೂಲ್ಯ ಜೀವಗಳಿಗೂ ಅಪಾಯ ಎದುರಾಗುವ ಸಾಧ್ಯತೆಗಳು ಹೆಚ್ಚು.