ಕಾಸರಗೋಡು: ದೇವಸ್ಥಾನ ಹಾಗೂ ಅಂಗಡಿಗಳ ಬೀಗ ಮುರಿದು ಸರಣಿ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಬಲತ್ತರ ಠಾಣೆ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.ಹೊಸದುರ್ಗ ಕಲ್ಲೂರಾವಿಯ ಶಹ. (18) ಮತ್ತು ಪುಲ್ಲೂರು ಮೂರನೇ ಮೈಲಿನ ವಾವಿಲ ಹೌಸ್ ನಿವಾಸಿ ಮೊಹಮ್ಮದ್ ಫಾಸಿಲ್ ಶಾನ್ ಎಂ. (18) ಬಂಧಿತರು.ನವೆಂಬರ್ 22 ಮತ್ತು 23ರಂದು ಪುಲ್ಲೂರು ಮೀಂಜೋತ್ ಪೆರುಂತೈ ಕೋವಿಲಪ್ಪನ್ ದೇವಸ್ಥಾನ ಹಾಗೂ ಮೂರನೇ ಮೈಲಿನ ‘ಮಣ್ಣಡಿ ಸ್ಟೋರ್’ ಅಂಗಡಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಇವರನ್ನು ಬಂಧಿಸಲಾಗಿದೆ.