ರೋಹ್ಟಕ್ ಗ್ಯಾಂಗ್ವಾರ್ನಲ್ಲಿ ನಾಲ್ವರು ಮೃತಪಟ್ಟಿದ್ದು, ಹನಿಟ್ರ್ಯಾಪ್ ಶಂಕೆ ವ್ಯಕ್ತವಾಗಿದೆ. ಪ್ರಮುಖ ಆರೋಪಿ ಎನ್ನಲಾದ ಜಾನ್ವಿ ಬ್ಯಾಂಕಾಕ್ಗೆ ಪರಾರಿಯಾಗಿದ್ದು, ಆಕೆಯನ್ನು ಪತ್ತೆಹಚ್ಚಲು ಪೊಲೀಸರು ಥಾಯ್ ಅಧಿಕಾರಿಗಳ ನೆರವು ಕೋರಿದ್ದಾರೆ. ಹನಿಟ್ರ್ಯಾಪ್ ಮೂಲಕ ಸನ್ನಿ ರಿಟೋಲಿಯಾನನ್ನು ಬಲೆಗೆ ಬೀಳಿಸಿ, ಹಿಮಾಂಶು ಭಾವು ಗ್ಯಾಂಗ್ ದಾಳಿಗೆ ಸಹಕರಿಸಿದ್ದಾರೆ ಎಂದು ತನಿಖೆ ಮುಂದುವರಿದಿದೆ. ಹರಿಯಾಣ, ನವೆಂಬರ್ 29: ಹರಿಯಾಣದ ರೋಹ್ಟಕ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ಈಗ ಹನಿಟ್ರ್ಯಾಪ್ನ ನಂಟು ಕೇಳಿಬಂದಿದೆ. ಗ್ಯಾಂಗ್ಸ್ಟರ್ಗಳ ನಡುವಿನ ವೈಷಮ್ಯಕ್ಕೆ ಮಹಿಳೆಯೊಬ್ಬಳನ್ನು ಬಳಸಿಕೊಂಡು ಎದುರಾಳಿ ಗುಂಪಿನವರನ್ನು ಬಲೆಗೆ ಬೀಳಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.