ಚಿಕ್ಕಮಗಳೂರಿನಲ್ಲಿ ಅರಣ್ಯ ಇಲಾಖೆಯ ಆಪರೇಷನ್ ಗಜ ಕಾರ್ಯಾಚರಣೆಯಿಂದ ತಪ್ಪಿಸಿಕೊಂಡ ಒಂಟಿ ಸಲಗ 22 ಕಿ.ಮೀ ಕ್ರಮಿಸಿ ಮಾಕೋನಹಳ್ಳಿ ಬಳಿ 15 ಕಾಡಾನೆಗಳ ಹಿಂಡನ್ನು ಸೇರಿಕೊಂಡಿದೆ. ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ 16 ಕಾಡಾನೆಗಳ ಹಿಂಡಿನ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಇತ್ತ ಬಿಳಿಗಿರಿರಂಗನಬೆಟ್ಟ ಅರಣ್ಯದಲ್ಲಿ ಯುವಕರು ಕಾಡಾನೆ ಕೆಣಕಿ ಹುಚ್ಚಾಟ ಮೆರೆದಿದ್ದಾರೆ. ಚಿಕ್ಕಮಗಳೂರು, ನವೆಂಬರ್ 29: ಮತ್ತಾವರ ಪ್ಲಾಂಟೇಶನ್ ಮತ್ತು ನೆಲ್ಲೂರು ಗುಡ್ಡ ಪ್ರದೇಶದಲ್ಲಿ ಓಡಾಟ ನಡೆಸಿದ್ದ ಒಂಟಿ ಸಲಗದ ಸೆರೆಗೆ ಅರಣ್ಯ ಇಲಾಖೆ ನಡೆಸಿದ್ದ ಆಪರೇಷನ್ ಗಜ ಕಾರ್ಯಚರಣೆಗೆ ಹಿನ್ನಡೆಯಾಗಿದ್ದು, ಮಾಕೋನಹಳ್ಳಿ ಬಳಿ ಬೀಡುಬಿಟ್ಟಿರುವ 15 ಕಾಡಾನೆಗಳ ಹಿಂಡನ್ನು ಒಂಟಿ ಸಲಗ ಸೇರಿಕೊಂಡಿದೆ.