ಪ್ರಧಾನಿ ಮೋದಿ ಮನ್ ಕಿ ಬಾತ್ನಲ್ಲಿ ಯುವಜನರಿಗೆ ಮಾದಕ ವ್ಯಸನದಿಂದ ದೂರವಿರಲು ಕರೆ ನೀಡಿದರು. ಕಳೆದುಹೋದ ಅಥವಾ ಕಳುವಾದ ಮೊಬೈಲ್ಗಳನ್ನು ಪತ್ತೆಹಚ್ಚಲು ಮತ್ತು ನಿರ್ಬಂಧಿಸಲು. ನವದೆಹಲಿ, ನವೆಂಬರ್ 29: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 29ರಂದು ಪ್ರಸಾರವಾದ 140ನೇ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಯುವಜನತೆ, ಮಾದಕ ವ್ಯಸನದ ವಿರುದ್ಧದ ಹೋರಾಟ, ಸರ್ಕಾರಿ ನೌಕರರ ಕೌಶಲ್ಯಾಭಿವೃದ್ಧಿ ಮತ್ತು ಮೊಬೈಲ್ ಸುರಕ್ಷತೆ ಕುರಿತು ಮಾತನಾಡಿದರು. ಯುವಕರ ಕನಸುಗಳಿಗೆ ಮಾದಕ ವಸ್ತುಗಳ ವ್ಯಸನ ದೊಡ್ಡ ಅಡ್ಡಿಯಾಗುತ್ತಿದೆ ಎಂದು ಎಚ್ಚರಿಸಿದ ಅವರು, ವ್ಯಸನಮುಕ್ತ ಯುವ ಅಭಿಯಾನದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಶ್ಲಾಘಿಸಿದರು.