ಇನ್ನೂ ಬಿಡುಗಡೆಯಾಗದ ಅತ್ಯಾಧುನಿಕ ಎಐ ಮಾಡಲ್ಗಳನ್ನು ಸುರಕ್ಷಿತವಾಗಿ ನಿಯಂತ್ರಿಸುವುದು ಕಷ್ಟವಾಗುತ್ತಿದೆ ಎಂದು ಓಪನ್ಎಐ ಮತ್ತು ಆಂಥ್ರೊಪಿಕ್ ಸಂಸ್ಥೆಗಳ ಸಿಬ್ಬಂದಿ ಕಳವಳ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನದ ವೇಗಕ್ಕೆ ತಕ್ಕಂತೆ ಸುರಕ್ಷತಾ ವ್ಯವಸ್ಥೆಗಳು ಸಿದ್ಧವಾಗಿಲ್ಲ ಎಂಬ ಚರ್ಚೆ ತೀವ್ರಗೊಂಡಿದೆ. ಓಪನ್ಎಐ, ಆಂಥ್ರೋಪಿಕ್ನಲ್ಲಿ ಕೆಲಸ ಮಾಡುವ ಹಲವು ಮಂದಿಯ ಅನಿಸಿಕೆ ಆಧರಿಸಿ ಆಕ್ಸಿಯೋಸ್ ಪ್ರಕಟಿಸಿದ ತನಿಖಾ ವರದಿಯಲ್ಲಿ ಈ ವಿಚಾರಗಳಿವೆ. ಕ್ಯಾಲಿಫೋರ್ನಿಯಾ, ನವೆಂಬರ್ 29: ಕೃತಕ ಬುದ್ಧಿಮತ್ತೆಯು ಜನರೇಟಿವ್ ಇಂಟೆಲಿಜೆನ್ಸ್ ಸ್ತರಕ್ಕೆ ಏರಿದರೆ ಮನುಷ್ಯರ ನಿಯಂತ್ರಣಕ್ಕೆ ಯಂತ್ರಗಳು ಸಿಗದಂತಾಗುತ್ತದೆ. ಮನುಷ್ಯ ಕುಲದ ಅವನತಿಯಾಗುತ್ತದೆ ಎನ್ನುವ ಅಭಿಪ್ರಾಯಗಳು ಎಐ ವಿಜ್ಞಾನಿಗಳು, ಎಐ ಕಂಪನಿಗಳ ಮುಖ್ಯಸ್ಥರಿಂದಲೇ ಬರುತ್ತಿವೆ.