ವಾಷಿಂಗ್ಟನ್: ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್ಎಕ್ಸ್ನ ಸ್ಟಾರ್ಲಿಂಕ್ ಈಗ ಅಂತರರಾಷ್ಟ್ರೀಯ ಸಂಘರ್ಷದ ವಿಚಾರವಾಗಿ ಸುದ್ದಿಯಲ್ಲಿದೆ. ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇ. ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ, ಇರಾನ್ ಸೇನೆ ಅಮೆರಿಕದ ಪಡೆಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಸ್ಟಾರ್ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆಯನ್ನು ಬಳಸಿಕೊಂಡಿದೆ ಎಂಬ ವರದಿ ಸಂಚಲನ ಮೂಡಿಸಿದೆ. ಈ ಅಕ್ರಮ ಬಳಕೆಯ ವಿಚಾರ ತಿಳಿದು ಎಲಾನ್ ಮಸ್ಕ್ ತೀವ್ರ ಆಕ್ರೋಶಗೊಂಡಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.ವಾಷಿಂಗ್ಟನ್ ಪೋಸ್ಟ್ಗೆ ಮಾಹಿತಿ ನೀಡಿರುವ ಇಬ್ಬರು ಮೂಲಗಳ ಪ್ರಕಾರ, ಸ್ಟಾರ್ಲಿಂಕ್ ಸೇವೆಯನ್ನು ಎರಡು ಬಾರಿ ಅನಧಿಕೃತವಾಗಿ ಬಳಸಿರುವುದು ಸ್ಪೇಸ್ಎಕ್ಸ್ನ ಗಮನಕ್ಕೆ ಬಂದಿದೆ.