ಪಾಟ್ನಾ: ಗುಟ್ಟು ರಟ್ಟಾಗುವ ಭಯದಲ್ಲಿ ಸೊಸೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಹೆತ್ತವಳಂತಿದ್ದ ಅತ್ತೆಯನ್ನೇ ಮುಗಿಸಿರುವ ಘೋರ ಕೃತ್ಯ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಮ. ತಮ್ಮ ಅನೈತಿಕ ಸಂಬಂಧವನ್ನು ಕಣ್ಣಾರೆ ಕಂಡಿದ್ದ 69 ವರ್ಷದ ರಾಮ್ಲಾ ದೇವಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸದ್ಯ ಸೊಸೆ ಗುಡ್ಡಿ ಕುಮಾರಿ ಮತ್ತು ಪ್ರಿಯಕರ ರಿಷಿ ಕುಮಾರ್ನನ್ನು ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.ಮಧ್ಯರಾತ್ರಿ ಕೋಣೆಗೆ ಬಂದ ಅತ್ತೆಗೆ ಕಾದಿತ್ತು ಆಪತ್ತುನವೆಂಬರ್ 25ರಂದು ಬೆಳಗಿನ ಜಾವ ಸುಮಾರು 3 ಗಂಟೆಗೆ ಟಿಕಾಪಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ನಯಾ ನಂದಗೋಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.