ನವದೆಹಲಿ: ಸಮಾಜವಾದಿ ಪಕ್ಷ ಶನಿವಾರ(ನ. 28) ತನ್ನ ಎಲ್ಲಾ ಲೋಕಸಭಾ ಸದಸ್ಯರಿಗೆ ಮೂರು ಸಾಲಿನ 'ವಿಪ್' (whip) ಜಾರಿಗೊಳಿಸಿದೆ. ಮತ್ತು ಸಂಸತ್ತಿನ ಮುಂಬರುವ ವಿಶೇಷ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜ. ಸಂಸದ ಹಾಗೂ ಪಕ್ಷದ ಮುಖ್ಯ ವಿಪ್ ಧರ್ಮೇಂದ್ರ ಯಾದವ್ ಅವರು, ಈ ವಿಪ್ ಹೊರಡಿಸಿದ್ದು, ನ. 3ರವರೆಗಿನ ಕಲಾಪಗಳಲ್ಲಿ ಎಲ್ಲಾ ಎಸ್ಪಿ ಸದಸ್ಯರು ಹಾಜರಿರಬೇಕು ಹಾಗೂ ಮಸೂದೆಗಳು ಮತದಾನಕ್ಕೆ ಬಂದಾಗ ಅವುಗಳನ್ನು ವಿರೋಧಿಸಬೇಕು ಎಂದು ಸೂಚಿಸಿದ್ದಾರೆ.ಈ ಅಧಿವೇಶನದಲ್ಲಿ ಸರ್ಕಾರವು 'ಸಂವಿಧಾನ (132ನೇ ತಿದ್ದುಪಡಿ) ಮಸೂದೆ, 2026', 'ಕ್ಷೇತ್ರ ವಿಂಗಡಣೆ (ಎರಡನೇ) ಮಸೂದೆ, 2026' ಮತ್ತು 'ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಎರಡನೇ ಮಸೂದೆ, 2026' ಅನ್ನು ಮಂಡಿಸಲಿದೆ.