ಕ್ರೈಸ್ಟ್ಚರ್ಚ್: ಪ್ರಸಕ್ತ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ (IND vs NZ Test) ಆತಿಥೇಯ ಕಿವೀಸ್ ತಂಡ ಪ್ರಾಬಲ್ಯ ಸಾಧಿಸಿದೆ. ಪಂದ್ಯದ ಮೂರನೇ ದಿ. ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ತನ್ನ ಎರಡನೇ ಇನಿಂಗ್ಸ್ನಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದೆ. ರಚಿನ್ ರವೀಂದ್ರ (46 ರನ್) ಮತ್ತು ಡ್ಯಾರಿಲ್ ಮಿಚೆಲ್ (5) ನಾಲ್ಕನೇ ದಿನಕ್ಕೂ ಕ್ರೀಸ್ನಲ್ಲಿ ಮುಂದುವರಿಯಲಿದ್ದಾರೆ.ಮೊದಲ ಇನಿಂಗ್ಸ್ನಲ್ಲಿ 110 ರನ್ಗಳ ಮುನ್ನಡೆ ಪಡೆದಿದ್ದ ನ್ಯೂಜಿಲೆಂಡ್ ಎರಡನೇ ಇನಿಂಗ್ಸ್ ಆರಂಭಿಸುತ್ತಿದ್ದಂತೆ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಶಾಕ್ ನೀಡಿದರು.