26 ವರ್ಷ ಸ್ವಚ್ಛತಾ ಕೆಲಸ ಮಾಡಿದ ತಾಯಿ; ಅದೇ ಸಂಸ್ಥೆಯಲ್ಲಿ ಎಂಜಿನಿಯರಿಂಗ್ನಲ್ಲಿ ಪಿಎಚ್ಡಿ ಪಡೆದ ಮಗಳು. ತಾಯಿಯ ಪರಿಶ್ರಮ, ತ್ಯಾಗ ಮತ್ತು ಮಕ್ಕಳ ಭವಿಷ್ಯದ ಮೇಲಿನ ನಂಬಿಕೆ ಎಂತಹ ಸಾಧನೆಗೆ ದಾರಿಯಾಗಬಹುದು ಎಂಬುದಕ್ಕೆ ಜಾರ್ಖಂಡ್ನ ಆರತಿ ಕುಮಾರಿ ಅವರ ಕಥೆ ಸಾಕ್ಷಿಯಾಗಿದೆ. ಬರೋಬ್ಬರಿ 26 ವರ್ಷಗಳ ಕಾಲ ಸ್ವಚ್ಛತಾ ಕಾರ್ಮಿಕೆಯಾಗಿ ದುಡಿದ ತಾಯಿಯ ಮಗಳು, ಇದೀಗ ತಾಯಿಯೇ ಕೆಲಸ ಮಾಡುತ್ತಿದ್ದ ಶಿಕ್ಷಣ ಸಂಸ್ಥೆಯಲ್ಲೇ ಎಂಜಿನಿಯರಿಂಗ್ನಲ್ಲಿ ಪಿಎಚ್ಡಿ ಪದವಿ ಪಡೆದು ಇದೀಗ ಎಲ್ಲಾರ ಗಮನ ಸೆಳೆದಿದ್ದಾರೆ.