ಬಿಗ್ ಬಾಸ್ ಮನೆಯಲ್ಲಿ ಯಶಸ್ ಭರ್ಜರಿ ಸೇಡು ತೀರಿಸಿಕೊಂಡಿದ್ದಾರೆ. ಗುಳ್ಳೆನರಿ ಸೀಕ್ರೆಟ್ ಟಾಸ್ಕ್ ಗೆದ್ದು ವಿಶೇಷ ಅಧಿಕಾರ ಪಡೆದ ಯಶಸ್, ತಮ್ಮ ಮೇಲಿದ್ದ ಇಡೀ ಸೀಸನ್ ನಾಮಿನೇಷನ್ ಅನ್ನು ಗಗನ್ ಅವರಿಗೆ ವರ್ಗಾಯಿಸಿದ್ದಾರೆ. ಕಿಚ್ಚ ಸುದೀಪ್ ಮುಂದೆ ಯಶಸ್ ತೆಗೆದುಕೊಂಡ ಈ ದಿಢೀರ್ ನಿರ್ಧಾರದಿಂದ ಗಗನ್ ಪೆಚ್ಚಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಯಾವಾಗ ಏನಾಗುತ್ತದೆ ಎಂದು ತಿಳಿಯೋದಿಲ್ಲ. ಅಲ್ಲಿ ಕರ್ಮ ಅನ್ನೋದು ಬಹುಬೇಗ ಕೆಲಸ ಮಾಡುತ್ತದೆ. ಯಾರಿಗಾದರೂ ಕೆಟ್ಟದ್ದು ಮಾಡಿದರೆ ಅಥವಾ ಬಯಸಿದರೆ ಅದು ಕೆಲವೇ ಸಮಯದಲ್ಲಿ ಹಿಂದಿರುಗಿ ಬರುತ್ತದೆ. ಅದಕ್ಕೆ ಈಗ ಬಿಗ್ ಬಾಸ್ ಮನೆಯಲ್ಲಿ ನಡೆದ ಅಚ್ಚರಿಯ ಬೆಳವಣಿಗೆಯೊಂದು ಉತ್ತಮ ಉದಾಹರಣೆ.