ನೆಲಮಂಗಲ ಸಮೀಪದ ಚಿಕ್ಕಗೊಲ್ಲರಹಟ್ಟಿಯಲ್ಲಿ ಒಂಟಿ ಮಹಿಳಾ ಮನೆ ಮಾಲೀಕರನ್ನು ಹೊರಗೆ ಕರೆದೊಯ್ದ ಬಾಡಿಗೆದಾರ ದಂಪತಿ, ನಕಲಿ ಕೀ ಬಳಸಿ 40 ಲಕ್ಷ ರೂ. ಮೌಲ್ಯದ 450 ಗ್ರಾಂ ಚಿನ್ನ ಮತ್ತು 2 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಲಾಗ್ತಿದೆ. ನೆಲಮಂಗಲ, ನವೆಂಬರ್ 29: ಪೂರ್ವಾಪರ ವಿಚಾರಿಸದೆ ಮನೆಯನ್ನು ದಂಪತಿಗೆ ಬಾಡಿಗೆಗೆ ನೀಡಿದ್ದ ಮಹಿಳಾ ಮಾಲೀಕರೋರ್ವರು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಬೆಂಗಳೂರು ಉತ್ತರ ತಾಳೂಕಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದಿದೆ.