Rahul Gandhi–DKS Row: ರಾಹುಲ್ ಗಾಂಧಿ ನನ್ನನ್ನು ತಳ್ಳಲಿಲ್ಲ; ಬಿಜೆಪಿಯವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ: ಸಿಎಂ ಡಿಕೆಶಿ. ರಾಹುಲ್ ಗಾಂಧಿ ಅವರು ನನ್ನನ್ನು ತಳ್ಳಲಿಲ್ಲ; ಬಿಜೆಪಿಯವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ ಆಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. "ದೆಹಲಿಯಲ್ಲಿ ನಡೆದ ಎಸ್ ಐಆರ್ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಅವರು ನನ್ನನ್ನು ತಳ್ಳಲಿಲ್ಲ. ಪ್ರತಿಭಟನಾಕಾರರು ಹೆಚ್ಚಾಗಿದ್ದರಿಂದ ಹಿಂದೆ ಬರುತ್ತಿದ್ದ ವಾಹನದಲ್ಲಿ ಹತ್ತುವಂತೆ ಸಲಹೆ ನೀಡಿ ನನ್ನ ಬಗ್ಗೆ ಕಾಳಜಿ ತೋರಿದರು".