ಇಂದು ರಾತ್ರಿಯಿಂದ 108 ಆ್ಯಂಬುಲೆನ್ಸ್ ಸೇವೆ ಬಂದ್: ನೌಕರರ ಬ್ಲ್ಯಾಕ್ಮೇಲ್ಗೆ ಜಗ್ಗಲ್ಲ ಎಂದ ಸಚಿವ ಯು.ಟಿ ಖಾದರ್. ಬೆಂಗಳೂರು: ರಾಜ್ಯದಲ್ಲಿ ತುರ್ತು ಆರೋಗ್ಯ ಸೇವೆಗೆ ಭಾರೀ ಪೆಟ್ಟು ಬೀಳುವ ಭೀತಿ ಎದುರಾಗಿದೆ. ವೇತನ ಪರಿಷ್ಕರಣೆ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರೋಗ್ಯ ಕವಚ '108' ಆ್ಯಂಬುಲೆನ್ಸ್ ನೌಕರರು ಬುಧವಾರ ರಾತ್ರಿ 10 ಗಂಟೆಯಿಂದಲೇ ಕರ್ತವ್ಯ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ತಿರ್ಮಾನಿಸಿದ್ದಾರೆ. ಒಂದೊಮ್ಮೆ ಸರ್ಕಾರ ಸ್ಪಂದಿಸದಿದ್ದರೆ, ಸಾಮೂಹಿಕ ರಾಜೀನಾಮೆ ನೀಡಲು ನೌಕರರು ನಿರ್ಧರಿಸಿದ್ದು.