Air India: ಹೈಜಾಕ್ ಅಲರ್ಟ್ ಬೆನ್ನಲ್ಲೇ ಮತ್ತೊಂದು ವಿಮಾನ ತುರ್ತು ಲ್ಯಾಂಡಿಂಗ್: ಜೈಪುರದಲ್ಲಿ ತೀವ್ರ ತಪಾಸಣೆ. ಜೈಪುರ: ಭಾರತದ ರಾಜಧಾನಿ ನವದೆಹಲಿಗೆ ಜರ್ಮನಿಯ ಫ್ರಾಂಕ್ಫರ್ಟ್ನಿಂದ ಬರುತ್ತಿದ್ದ ಏರ್ ಇಂಡಿಯಾ (Air India Flight) ವಿಮಾನವು ಇಂದು ಜೈಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಹೈಜಾಕ್/ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಎಚ್ಚರಿಕೆ ಸಂದೇಶ ರವಾನಿಸುತ್ತಿದ್ದಂತೆ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಯಿತು ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ವಿಮಾನ ಹೈಜಾಕ್ ಸಂದೇಶ ರವಾನಿಸಿದ್ದ ವಿಮಾನವು ಇಸ್ರೇಲ್ನಲ್ಲಿ ತುರ್ತು ಲ್ಯಾಂಡ್.