8 ತಿಂಗಳ ಶ್ರಮ ಕೆಲವೇ ವಾರಗಳಲ್ಲಿ ನೀರುಪಾಲು! ಎದೆಗುಂದದೆ ಮತ್ತೆ ಅಜ್ನಾರ್ ನದಿ ಸ್ವಚ್ಛತೆಗೆ ಇಳಿದ ಬಿಟ್ಟು ತಬಾಹಿ. ಪರಿಸರ ಸಂರಕ್ಷಣೆಯ ಬಗ್ಗೆ ಬರೀ ಭಾಷಣ ಮಾಡುವವರ ಮಧ್ಯೆ, ಎಲೆಮರೆಕಾಯಿಯಂತೆ ನೂರಾರು ಟನ್ ಕಸ ಎತ್ತಿ ನದಿಯೊಂದಕ್ಕೆ ಮರುಜೀವ ನೀಡಿದ್ದ ಯುವಕನ ಶ್ರಮ ಕೇವಲ ಕೆಲವೇ ವಾರಗಳಲ್ಲಿ ನೀರಿನ ಪಾಲಾಗಿದೆ. ಹೌದು, ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯ ಅಜ್ನಾರ್ ನದಿಯನ್ನು ಸತತ ಎಂಟು ತಿಂಗಳುಗಳ ಕಾಲ ಏಕಾಂಗಿಯಾಗಿ ಸ್ವಚ್ಛಗೊಳಿಸಿದ್ದ 20 ವರ್ಷದ ಸುರೇಂದ್ರ ಸಿಂಗ್ ಚೌಧರಿ ಅಂದರೆ ಸೋಶಿಯಲ್.