ಹೂಕೋಸುಗಳಲ್ಲಿ ಸಣ್ಣ ಸಣ್ಣ ಕೀಟಗಳು, ಹುಳಗಳು ಇರುತ್ತವೆ. ಎಷ್ಟೇ ಸ್ವಚ್ಛಗೊಳಿಸಿದರೂ ಸಹ ಇವುಗಳು ಹೋಗುವುದೇ ಇಲ್ಲ. ಹಾಗಾಗಿ ಹೂಕೋಸನ್ನು ಸ್ವಚ್ಛಗೊಳಿಸುವುದು ತುಂಬಾನೇ ಕಷ್ಟಕರ ಎಂದು ಅನೇಕರು ಭಾವಿಸುತ್ತಾರೆ. ಆದರೆ ಇದನ್ನು ಕ್ಲೀನ್ ಮಾಡೋದು ಅಷ್ಟೇನು ಕಷ್ಟಕರ ಅಲ್ವೇ ಅಲ್ಲ. ಕೆಲವೊಂದು ಸರಳ ವಿಧಾನಗಳ ಮೂಲಕ ಹುಳುಗಳನ್ನು ತೆಗೆದುಹಾಕಿ ಹೂಕೋಸನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬಹುದು. ಇದನ್ನು ಬಹುತೇಕ ಎಲ್ಲರೂ ಸಹ ಇಷ್ಟಪಟ್ಟು ಸೇವನೆ ಮಾಡುತ್ತಾರೆ. ಆದರೆ ಇದನ್ನು ಸ್ವಚ್ಛಗೊಳಿಸುವುದೇ ಅನೇಕರಿಗೆ ದೊಡ್ಡ ತಲೆನೋವು. ಹೂಕೋಸುಗಳ ದಟ್ಟವಾದ ವಿನ್ಯಾಸದ ಕಾರಣದಿಂದಾಗಿ ಇವುಗಳಲ್ಲಿ ಕೀಟ, ಹುಳುಗಳು ಯಥೇಚ್ಚವಾಗಿ ಇರುತ್ತವೆ. ಎಷ್ಟೇ ತೊಳೆದರೂ ಸಹ ಈ ಸಣ್ಣ ಹುಳುಗಳು ಹಾಗೆಯೇ ಉಳಿದು ಬಿಡುತ್ತವೆ.