ಚಿನ್ನದ ಬೆಲೆ 14 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಭಾರತದ ಚಿನ್ನದ ಆಮದು ಈ ಹಣಕಾಸು ವರ್ಷದಲ್ಲಿ ಗಣನೀಯವಾಗಿ ಇಳಿದಿದೆ. ತಿಂಗಳುಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಚಿನ್ನದ ಖರೀದಿ ನಿಲ್ಲಿಸುವಂತೆ ಜನರಿಗೆ ಕರೆ ನೀಡಿದ್ದರು. ಚಿನ್ನದ ಆಮದು ಕಡಿಮೆಗೊಂಡ ಪರಿಣಾಮವಾಗಿ ಭಾರತಕ್ಕೆ ಲಕ್ಷಾಂತರ ಕೋಟಿ ರೂ ಆಮದು ಹೊರೆ ತಗ್ಗಿದೆ. ನವದೆಹಲಿ, ನವೆಂಬರ್ 23: ಪ್ರಚಂಡ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಕೆಲ ತಿಂಗಳಿನಿಂದ ಝರ್ರನೆ ಕುಸಿಯುತ್ತಾ ಬರುತ್ತಿದೆ. ಚಿನ್ನದ ಬೆಲೆ ಉಚ್ಚ್ರಾಯ ಹಂತಕ್ಕೆ ಹೋದಾಗ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣದಲ್ಲೊಮ್ಮೆ, ಬಂಗಾರದ ಖರೀದಿಯನ್ನು ಕಡಿಮೆ ಮಾಡಿ ಎಂದು ಕರೆ ನೀಡಿದ್ದರು.