ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ದೃಶ್ಯಗಳನ್ನು ನಮ್ಮ ಕಣ್ಣಿಂದ ನಂಬಲಾಗುವುದಿಲ್ಲ. ಇದೀಗ ಅಂತಹದ್ದೇ ವಿಡಿಯೋ ವೈರಲ್ ಆಗಿದೆ. ಹಸಿದ ನಾಯಿಮರಿಗಳಿಗೆ ಹಸುವೊಂದು ಹಾಲುಣಿಸಿ ಮಾತೃ ಪ್ರೇಮವನ್ನು ಉಣಬಡಿಸಿದೆ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲದೆ. ಮಾತುಬಾರದ ಮೂಕ ಪ್ರಾಣಿಗಳು ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತವೆ. ಪ್ರಾಣಿಗಳ ನಡುವಿನ ಈ ಅಪರೂಪದ ಪ್ರೀತಿ ವಾತ್ಸಲ್ಯದ ದೃಶ್ಯ ಇದಾಗಿದೆ. ತನ್ನ ಕರುಗಳಲ್ಲದ ನಾಯಿಮರಿಗಳಿಗೆ (puppies) ಹಸುವೊಂದು ಹಾಲುಣಿಸಿದ ವಿಡಿಯೋ ವೈರಲ್ ಆಗಿದೆ. ಈ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಕಣ್ಣು ಒದ್ದೆಯಾಗಿದೆ.