ಈಗಿನ ಕಾಲದಲ್ಲಿ ಊಟ ತಿಂಡಿ ಕೂಡ ದುಬಾರಿಯಾಗಿದೆ. ಇದೀಗ ಲಂಡನ್ನಿಂದ ಭಾರತಕ್ಕೆ ಬಂದ ಯುವತಿಯೊಬ್ಬಳು ವಿದೇಶಿ ಜೀವನಕ್ಕೂ ಇಲ್ಲಿಗೂ ಏನು ವ್ಯತ್ಯಾಸ ಇಲ್ಲ ಎಂದೆನಿಸಿದೆ. ದೆಹಲಿಯ ರೆಸ್ಟೋರೆಂಟ್ ನ ಬಿಲ್ ನೋಡಿ ಶಾಕ್ ಆಗಿದ್ದು, ಆಕೆ ಮಾಡಿದ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ. ಸ್ನೇಹಿತರು, ಕುಟುಂಬದವರ ಜತೆಗೆ ಹೊರಗಡೆ ಹೋದಾಗ ರೆಸ್ಟೋರೆಂಟ್ ಗಳಿಗೆ (restaurant) ಊಟಕ್ಕೆಂದು ಹೋಗುವುದು ಸಹಜ. ಇದೀಗ ವಿದೇಶದಿಂದ ಬಂದ ಯುವತಿ ದೆಹಲಿಯ ರೆಸ್ಟೋರೆಂಟ್ ಗೆ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಊಟಕ್ಕೆಂದು ತೆರಳಿದ್ದಾಳೆ.