ಮಾಡರ್ನ್ ಕವಿ ಮಂಜ, ಅಗ್ನಿಪರೀಕ್ಷೆ ಮೂಲಕ ಟಿಕೆಟ್ ಪಡೆದು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ಬಿಗ್ಬಾಸ್ ಮನೆಯಲ್ಲಿ ರೌಡಿ ವರ್ತನೆ, ಕೊಳಕುತನ ತೋರಿಸಿದ ಕಾರಣ ಆತನನ್ನು ಮನೆಯಿಂದ ಹೊರಗೆ ಹಾಕಲಾಗಿತ್ತು. ಆದರೆ ಸುದೀಪ್ ಅವರು ಮಂಗನ ಮೇಲೆ ಕರುಣೆ ತೋರಿಸಿ ಮಂಜನ್ನು ಮತ್ತೆ ಬಿಗ್ಬಾಸ್ ಮನೆಗೆ ಕಳಿಸಿದ್ದರು. ಆದರೆ ಮನೆಗೆ ಹೋದ ಕೆಲವೇ ವಾರದಲ್ಲಿ ಮಂಜನನ್ನು ಮತ್ತೆ ಹೊರಗೆ ಕಳಿಸಲಾಗಿದೆ. ಮಂಜನನ್ನು ಮರಳಿ ಮನೆಗೆ ಕಳಿಸಬೇಕಾದರೆ ಮಂಜನನ್ನು ಅತಿಥಿಯಾಗಿ ಮಾತ್ರವೇ ಒಳಗೆ ಕಳಿಸುತ್ತಿರುವುದಾಗಿ ಪ್ರೇಕ್ಷಕರಿಗೆ ಹೇಳಲಾಗಿತ್ತು. ಮಂಜ ಇದ್ದ ಮೂರು ವಾರ, ಸ್ಪರ್ಧಿಯಾಗಿ ಅಲ್ಲ ಬದಲಿಗೆ ಅತಿಥಿ ಆಗಿ ಮಾತ್ರವೇ ಮನೆಯಲ್ಲಿದ್ದರು.