ಮುಂಬೈ: ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಎ ಗುಂಪಿನಲ್ಲಿ 3ನೇ ಸೋಲು ಅನುಭವಿಸುವುದರೊಂದಿಗೆ ಸೂಪರ್ ಲೀಗ್ ಹಂತಕ್ಕೇರುವ ರೇಸ್ನಲ್ಲಿ ಭಾರಿ ಹಿನ್ನಡೆ ಕಂಡಿದೆ. ಕರ. ಕರ್ನಾಟಕ ತಂಡ ಭಾನುವಾರ ನಡೆದ ತನ್ನ 5ನೇ ಲೀಗ್ ಪಂದ್ಯದಲ್ಲಿ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಚಂಡೀಗಢ ಎದುರು 7 ವಿಕೆಟ್ಗಳಿಂದ ಶರಣಾಯಿತು. ಸ್ಮರಣ್ ಪಡೆ ಅಂಕಪಟ್ಟಿಯಲ್ಲಿ 8 ಅಂಕದೊಂದಿಗೆ 5ನೇ ಸ್ಥಾನಕ್ಕೆ ಕುಸಿದಿದೆ. ರಾಜ್ಯಕ್ಕೆ ಇನ್ನು 2 ಲೀಗ್ ಪಂದ್ಯಗಳಷ್ಟೇ ಬಾಕಿ ಇವೆ. ಗುಂಪಿನ ಅಗ್ರ 2 ತಂಡಗಳಷ್ಟೇ ಸೂಪರ್ ಲೀಗ್ ಹಂತಕ್ಕೇರಲಿವೆ.