ಬಾಲಿವುಡ್ ಅನ್ನು ಆಳುತ್ತಿರುವ ದೀಪಿಕಾ ಪಡುಕೋಣೆ ಅಪ್ಪಟ ಬೆಂಗಳೂರಿನ ಬಾಲೆ. ದೀಪಿಕಾ ಪಡುಕೋಣೆ ಹಲವು ವರ್ಷಗಳಿಂದ ಮುಂಬೈನಲ್ಲೇ ನೆಲೆಸಿದ್ದಾರಾದರೂ ಬೆಂಗಳೂರಿನ ಸೆಳೆತ ಅವರಿಗೆ ಕಡಿಮೆ ಆಗಿಲ್ಲ. ಬೆಂಗಳೂರಿಗೆ ಬಂದಿರುವ ನಟಿ ದೀಪಿಕಾ ಪಡುಕೋಣೆ, ಮಲ್ಲೇಶ್ವರಂನ ಸಿಟಿಆರ್ ಹೋಟೆಲೆಗೆ ಭೇಟಿ ನೀಡಿ ದೋಸೆ ಸವಿದಿದ್ದಾರೆ. ಬಾಲಿವುಡ್ ಮಾತ್ರವಲ್ಲ ಹಾಲಿವುಡ್ ಸಿನಿಮಾನಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತನ್ನ ಅದ್ಭುತ ಬೆಣ್ಣೆ ಭರಿತ ಕ್ರಿಸ್ಪಿ ದೋಸೆ ಮತ್ತು ಫಿಲ್ಟರ್ ಕಾಫಿ ಹಾಗೂ ಇನ್ನಿತರೆ ತಿನಿಸುಗಳ ಕಾರಣಕ್ಕೆ ದೇಶದ ಹಲವೆಡೆಗಳಿಂದ ಗ್ರಾಹಕರನ್ನು ಸೆಳೆಯುತ್ತಿರುವ ಮಲ್ಲೇಶ್ವರದ ಸಿಟಿಆರ್ (ಸೆಂಟ್ರಲ್ ಟಿಫಿನ್ ರೂಂ)ಗೆ ಇಂದು (ನವೆಂಬರ್ 22) ದೀಪಿಕಾ ಪಡುಕೋಣೆ ಭೇಟಿ ನೀಡಿದ್ದರು.