ರಶ್ಮಿಕಾ ಮಂದಣ್ಣ ‘ಮೈಸಾ’ ಸಿನಿಮಾನಲ್ಲಿ ಮೊದಲ ಬಾರಿಗೆ ಭರ್ಜರಿ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾದ ಪೋಸ್ಟರ್, ಟೀಸರ್ಗಳಲ್ಲಿ ರಕ್ತ-ಸಿಕ್ತವಾಗಿ ಅತ್ಯಂತ ವಯಲೆಂಟ್ ಆಗಿ ಕಾಣಿಸಿಕೊಂಡಿದ್ದರು. ಇದೇ ಕಾರಣಕ್ಕೆ ಸಿನಿಮಾದ ಬಗ್ಗೆ ರಶ್ಮಿಕಾ ಅಭಿಮಾನಿಗಳಿಗೆ ನಿರೀಕ್ಷೆಗಳಿದ್ದವು. ಸಿನಿಮಾ ನವೆಂಬರ್ 27ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಬಿಡುಗಡೆಗೆ ಇನ್ನು ನಾಲ್ಕು ದಿನಗಳಿರುವಾಗ ಸಿನಿಮಾ ರಿಲೀಸ್ ಅನ್ನು ಮುಂದೂಡಲಾಗಿದೆ. ರಶ್ಮಿಕಾ ಮಂದಣ್ಣ ನಟನೆ ಮಾಡಿರುವ ಆಕ್ಷನ್ ಸಿನಿಮಾ ‘ಮೈಸಾ’ ತನ್ನ ಟೀಸರ್, ಹಾಡು, ಬಿಹೈಂಡ್ ದಿ ಕ್ಯಾಮೆರಾ ವಿಡಿಯೋಗಳಿಂದ ಸಖತ್ ಕುತೂಹಲ ಮೂಡಿಸಿತ್ತು. ರಶ್ಮಿಕಾ ಮಂದಣ್ಣ ಅಂತೂ ಮೊದಲ ಬಾರಿಗೆ ಭರ್ಜರಿ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು.