ಪ್ರಧಾನಿ ಮೋದಿ ಐಟಿಐ ವಿದ್ಯಾರ್ಥಿಗಳಿಗೆ ಐಐಟಿ ವಿದ್ಯಾರ್ಥಿಗಳಷ್ಟೇ ಗೌರವ ನೀಡಬೇಕು ಎಂದು ಕರೆ ನೀಡಿದ್ದಾರೆ. ಸಮಾಜವು ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣದ ಬಗ್ಗೆ ಹೊಂದಿರುವ ಮನೋಭಾವ ಬದಲಾಗಬೇಕು. ಕೈಗಾರಿಕೆಗಳ ಕಾರ್ಯನಿರ್ವಹಣೆಗೆ ನುರಿತ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದು. ಸಾಂಪ್ರದಿಕ ಪದವಿಗಳಷ್ಟೇ ಐಟಿಐ ತರಬೇತಿಯು ಉದ್ಯೋಗ ಮತ್ತು ವೃತ್ತಿಪರ ಬೆಳವಣಿಗೆಗೆ ಪ್ರಮುಖ ಮಾರ್ಗವಾಗಿದೆ ಎಂದು ಅವರು ಒತ್ತಿ ಹೇಳಿದರು. ನವದೆಹಲಿ, ನವೆಂಬರ್ 22: ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣದ ಬಗೆಗಿನ ಸಾಮಾಜಿಕ ಮನೋಭಾವ ಬದಲಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಐಟಿಐ (ITI) ವಿದ್ಯಾರ್ಥಿಗಳೂ ಐಐಟಿ (IIT) ವಿದ್ಯಾರ್ಥಿಗಳಷ್ಟೇ ಗೌರವಕ್ಕೆ ಅರ್ಹರು.