ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹಾಗೂ ಸಹೋದರಿ ಶರ್ಮಿಳಾ ರೆಡ್ಡಿ ನಡುವೆ ಆಸ್ತಿ ವಿವಾದ ತಾರಕಕ್ಕೇರಿದ್ದು, ಬಾಗಲೂರು ಮುಖ್ಯರಸ್ತೆಯ ಕಟ್ಟಿಗೆನಹಳ್ಳಿ ಬಳಿಯ ಜಗನ್ ಪ್ಯಾಲೇಸ್ನಲ್ಲಿ ಶರ್ಮಿಳ ಮಗಳ ಮದುವೆ ಮಾಡಲು ಜಗನ್ ಮೋಹನ್ ರೆಡ್ಡಿ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನ್ಯಾಯಾಲಯದಿಂದ ಶರ್ಮಿಳಾ ವಿರುದ್ದ ನಿರ್ಬಂಧಕಾಜ್ಞೆ ತಂದಿದ್ದಾರೆ. ಬೆಂಗಳೂರು, ನವೆಂಬರ್ 22: ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹಾಗೂ ಸಹೋದರಿ, ಆಂಧ್ರ ಕಾಂಗ್ರೆಸ್ ಅಧ್ಯಕ್ಷ ಶರ್ಮಿಳಾ ರೆಡ್ಡಿ ನಡುವೆ ಆಸ್ತಿ ವಿವಾದ ತಾರಕಕ್ಕೇರಿದೆ. ಹೀಗಾಗಿ ಬಾಗಲೂರು ಮುಖ್ಯರಸ್ತೆಯ ಕಟ್ಟಿಗೆನಹಳ್ಳಿ ಬಳಿಯ ಜಗನ್ ಪ್ಯಾಲೇಸ್ನಲ್ಲಿ ಶರ್ಮಿಳ ಮಗಳ ಮದುವೆ ಮಾಡಲು ಜಗನ್ ಮೋಹನ್ ರೆಡ್ಡಿ ವಿರೋಧ ವ್ಯಕ್ತಪಡಿಸಿದ್ದಾರೆ.