ನೆದರ್ಲ್ಯಾಂಡ್ಸ್ ವಿದೇಶಾಂಗ ಸಚಿವ ಟಾಮ್ ಬೆರೆಂಡ್ಸೆನ್ ಅವರು ನವೆಂಬರ್ 22, 23ರಂದು ಎರಡು ದಿನಗಳ ಭಾರತ ಭೇಟಿಗಾಗಿ ಭಾನುವಾರ ದೆಹಲಿಗೆ ಆಗಮಿಸಿದ್ದಾರೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಐಟಿಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ನೆದರ್ಲ್ಯಾಂಡ್ ವಿದೇಶಾಂಗ ಸಚಿವರು ಪ್ರತ್ಯೇಕವಾಗಿ ಭೇಟಿ ಮಾಡಲಿದ್ದಾರೆ. ನವದೆಹಲಿ, ನವೆಂಬರ್ 22: ಐರೋಪ್ಯ ರಾಷ್ಟ್ರವಾದ ದಿ ನೆದರ್ಲ್ಯಾಂಡ್ಸ್ನ ವಿದೇಶಾಂಗ ಸಚಿವ ಟಾಮ್ ಬೆರೆಂಡ್ಸೆನ್ (Tom Berendsen) ಭಾರತಕ್ಕೆ ಇಂದು ಭಾನುವಾರ ಆಗಮಿಸಿದ್ದಾರೆ. ನವೆಂಬರ್ 22 ಮತ್ತು 23ರಂದು ಎರಡು ದಿನಗಳ ಅಧಿಕೃತ ಪ್ರವಾಸಕ್ಕೆಂದು ಬಂದಿರುವ ಬೆರೆಂಡ್ಸೆನ್ ಅವರನ್ನು ಕೇಂದ್ರ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸ್ವಾಗತಿಸಿದ್ದಾರೆ.