ಬಿಸ್ಲೇರಿ ಬ್ರಾಂಡ್ 'ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್' ಆಗಿದ್ದು, ನಾವು ಸಾಮಾನ್ಯವಾಗಿ 'ಮಿನರಲ್ ವಾಟರ್' ಎಂದು ಕರೆಯುವುದೇ ಬಿಸ್ಲೇರಿಯನ್ನು, ಅಷ್ಟರ ಮಟ್ಟಿಗೆ ಮಾರುಕಟ್ಟೆಯಲ್ಲಿ ಈ ಬಿಸ್ಲೇರಿ ವಾಟರ್ ಬೇರೂರಿದೆ. ಆದ್ರೆ, ಇದೀಗ ಬಿಸ್ಲೇರಿ ಡ್ರಿಂಕಿಂಗ್ ವಾಟರ್ ಶುದ್ಧವಿಲ್ಲ ಎನ್ನುವುದು ಪರೀಕ್ಷೆಯಲ್ಲಿ ದೃಢವಾಗಿದೆ. ಇದರಿಂದ ಬಿಸ್ಲೇರಿ ಇಂಟರ್ನ್ಯಾಷನಲ್ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಲಾಗಿದೆ. ಬೆಂಗಳೂರು, (ನವೆಂಬರ್ 22): ಬಿಸ್ಲೇರಿ ಭಾರತದ ಅತ್ಯಂತ ಜನಪ್ರಿಯ ಮತ್ತು ಪ್ರಮುಖ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರಾಂಡ್ ಆಗಿದೆ. 1969ರಲ್ಲಿ ಸ್ಥಾಪಿಸಲ್ಪಟ್ಟ ಬಿಸ್ಲೇರಿ ಇಂಟರ್ನ್ಯಾಶನಲ್ ಸಂಸ್ಥೆಯು, ದೇಶಾದ್ಯಂತ ಮಾರುಕಟ್ಟೆಯಲ್ಲಿ ಒಂದು ಬ್ರಾಂಡ್ ಆಗಿ ಗುರುತಿಸಿಕೊಂಡಿದೆ.